ಯೂರೋಪಿಯನ್ ರಾಬಿನ್ ಮಧುರವಾಗಿ ಹಾಡುವ ಪುಟ್ಟ ಪಕ್ಷಿ. ಎರಿಥ್ಯಾಕಸ್ ರುಬೆಕುಲ ಇದರ ಶಾಸ್ತ್ರೀಯ ನಾಮ. ಇದನ್ನು ಬ್ರಿಟನ್ನಿನ ರಾಷ್ಟ್ರೀಯ ಪಕ್ಷಿ ಎಂದು ಪರಿಗಣಿಸಲಾಗಿದೆ. == ದೇಹರಚನೆ == 13 ಸೆಂಮೀ ಉದ್ದವಿರುವ ಪುಕ್ಕಗಳಿವೆ. ಗಂಟಲು ಮತ್ತು ಹಣೆಗೆ ಬೂದುಬಣ್ಣದ ಅಂಚು ಇದೆ. == ಆಹಾರ == ಈ ಪಕ್ಷಿ ತನ್ನ ಚಿಕ್ಕ ಮೊನಚಾದ ಕೊಕ್ಕಿನಿಂದ ಕೀಟ, ಡಿಂಬ, ಎರೆಹುಳು, ಹಣ್ಣು ಮತ್ತು ಬೀಜಗಳನ್ನು ಎತ್ತಿಕೊಂಡು ತಿನ್ನುತ್ತದೆ. == ಸಾಮಾಜಿಕ ವರ್ತನೆ == ಬ್ರಿಟನ್ನಿನಲ್ಲಿ ಈ ಪಕ್ಷಿ ಪಟ್ಟಣ, ತೋಟ ಮತ್ತು ಕೃಷಿಭೂಮಿಗಳಲ್ಲಿ ಸರ್ವೇಸಾಮಾನ್ಯವಾಗಿ ಕಾಣಬರುತ್ತದೆ. ಈ ಪಕ್ಷಿ ತಮ್ಮ ಸುತ್ತಮುತ್ತಲಿನ ಭೂಪ್ರದೇಶವನ್ನು ಗುರುತಿಸಿಕೊಂಡು ಸೀಮೆಯನ್ನು ಕಾಯ್ದುಕೊಳ್ಳುತ್ತದೆ. ತನ್ನ ಸೀಮೆಯೊಳಗೆ ಬರುವ ಆಗಂತುಕರನ್ನು ತನ್ನ ಹಾಡಿನ ಮೂಲಕ ಎಚ್ಚರಿಸುವುದೂ ಉಂಟು. ಪಕ್ಷಿಗಳ ಕೂಗು ಅವುಗಳ ಸೀಮೆಯನ್ನು ಕಾಯ್ದುಕೊಳ್ಳುವ ಸಲುವಾಗಿಯೂ ಬಳಕೆಯಾಗುತ್ತದೆ ಎಂಬುದಕ್ಕೆ ಒಂದು ಉತ್ತಮ ಉದಾಹರಣೆ ರಾಬಿನ್ ಹಕ್ಕಿಯ ಕೂಗು. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == : , & . : ( 27 2011 ವೇಬ್ಯಾಕ್ ಮೆಷಿನ್ ನಲ್ಲಿ.) (; 2.9 ) - & -